ನಿಮಗೆ ಯಾವತ್ತಾದರೂ ಅನಿಸಿರಬಹುದಾ,
ಹಂಪೆಯ ಕಲಾವಿದರು ನಿಗೂಢವಾಗಿ ಏಕೆ ಕಣ್ಮರೆಯಾದರು?
ತಾಳೀಕೋಟೆಯ ಕದನದ ನಂತರ ಹಂಪೆಯ ತದ್ರೂಪಿನಂತಹ ಕಲಾಕೃತಿಗಳೇಕೆ ಮತ್ತೊಮ್ಮೆ ಕರ್ನಾಟಕ ಯಾವ ಭಾಗದಲ್ಲಿಯೂ ರಚನೆಯಾಗಲಿಲ್ಲವೇಕೆ?
ಹಂಪೆಯ ವರ್ತಕರು, ರೈತರು, ಊಳಿಗದವರು, ವ್ಯಾಪರಸ್ಥರು, ಪ್ರವಾಸಿಗರು, ಕೊನೆಗೆ ಗಣಿಕಾ ಸ್ತ್ರೀಯರು ಎತ್ತ ಹೋದರು?
ಹಂಪೆಯ ಅಧ್ವಾನಕ್ಕೆ ಷರಾ ಬರೆದು ಬಿಟ್ಟನಾ ಆ ರಾಜ?
ಯಾರ ಬುದ್ಧಿಹೀನ ಕಾರ್ಯದಿಂದ ಹಂಪೆಗೆ ಇಂಥಾದ್ದೊಂದು ಗತಿ ಬಂದೊದಗಿತು?
ನೀವೆಂದೂ ಊಹಿಸಿರದ ಹಂಪೆಯ ರಕ್ತಸಿಕ್ತ ಚರಿತೆಯ ಮುಂದುವರೆದ ಕಥೆ...
ಜನವರಿ 26,1565 ! ಇದು ಹಂಪೆಯ ಪಾಲಿಗೆ ಎಂದೂ ಮರೆಯದ ಕರಾಳ ದಿನ.. ಆವತ್ತು ದಖನ್ನಿನ ಮುಸ್ಲಿಂ ರಾಜರೆಲ್ಲ ಒಟ್ಟಾಗಿ ವಿಜಯನಗರದ ವಿರುದ್ಧ ವಿಜಯ ಸಾಧಿಸಿದ ಕೆಟ್ಟದಿನ, ಅಹ್ಮದ್ ನಗರ, ಬೀದರ್, ಬೀಜಾಪುರ, ಗೋಲ್ಕೋಂಡಾದ ನವಾಬರು ಸೇರಿ ಪಿತೂರಿಯಿಂದ ಹಂಪೆಯ ನಾಮಾವಶೇಷ ಮಾಡಿದ ದಿನ,
ಆದರೆ ನೆನಪಿರಲಿ, ಅಚ್ಚುತರಾಯನ ನಂತರ ಬಂದ ಅಳಿಯ ರಾಮರಾಯನೇನೂ ಕಡಿಮೆ ಸಾಮರ್ಥ್ಯದವನೇನಲ್ಲಾ, ಅದಾಗ್ಯೂ ಅವನ ಆ ಒಂದು ನಿರ್ಧಾರ ಹಂಪೆಯ ಪಾಲಿಗೆ ಬಹು ದೊಡ್ಡ ನರಕದ ಹಾದಿ ತೋರಿದ್ದು ಮಾತ್ರ ಸುಳ್ಳಲ್ಲ,
ದಖನ್ನಿನ ಸುಲ್ತಾನರು ಸುಮ್ಮ ಸುಮ್ಮನೇ ಬಂದು ವಿಜಯನಗರದ ವಿರುದ್ಧ ಹೋರಾಟಕ್ಕಿಳಿಯಲಿಲ್ಲ, ಅಳಿಯ ರಾಮರಾಯನ ಮೂರ್ಖತನವನ್ನ ಅವರು ಸರಿಯಾಗಿ ಉಪಯೋಗಿಸಿಕೊಂಡರಷ್ಟೇ,
ಅಚ್ಚುತರಾಯನ ನಂತರ ಬಂದ ರಾಮರಾಯನಿಗೆ ಆಗಲೇ ಉಚ್ಛ್ರಾಯ ಸ್ಥಿತಿಗೆ ಬಂದ ವಿಜಯನಗರವನ್ನ ಉತ್ತರದೇಶದವರೆಗೂ ವ್ಯಾಪಿಸಬೇಕೆಂಬ ಹುಚ್ಚು ಆಸೆಯಿತ್ತು, ಇದಕ್ಕೆ ತಡೆಯಾಗಿದ್ದು ಮಾತ್ರ ದಖನ್ನಿನ ಮುಸ್ಲಿಂ ರಾಜರುಗಳು, ಹೇಗಾದರೂ ಸರಿ ಇವರನ್ನೆಲ್ಲಾ ಸೋಲಿಸಿದರೆ, ತನ್ನ ಕನಸು ಸಾಕಾರವಾಗುವದೆಂಬ ಕಲ್ಪನೆಗೆ ಬಿದ್ದ ರಾಮರಾಯ, ಯದ್ವಾತದ್ವಾ ಸೈನ್ಯವನ್ನ ಬಲಪಡಿಸತೊಡಗುತ್ತಾನೆ,
ಯೆಸ್! ಇದೇ ಸರಿಯಾದ ಸಮಯ, ಅದು ದಖನ್ನಿನ ಎಲ್ಲಾ ಮುಸ್ಲಿಂ ರಾಜರು ಒಂದಾದ ಸಮಯ! ಯಾವಾಗ ರಾಮರಾಯನ ಈ ಸೈನ್ಯದ ವಿಸ್ತರೀಕರಣದ ವಿಷಯ ಅವರ ಕಿವಿಗೆ ಬಿತ್ತೋ ಅವರೆಲ್ಲಾ ಷಡ್ಯಂತ್ರ ರೂಪಿಸಿದರು,
ಹಿಂದೂಗಳ ವೇಷದಲ್ಲಿ ಹಂಪೆಗೆ ಬಂದಿಳಿದ ದಖನ್ನಿನ ಮುಸ್ಲಿಂ ಸೈನಿಕರು!.
ಹೌದು, ಯಾವಾಗ ರಾಮರಾಯ ಸೈನ್ಯದ ಬಲ ಹೆಚ್ಚು ಮಾಡುವ ಕೆಲಸಕ್ಕೆ ಕೈ ಹಾಕಿದನೋ ಆಗ ಹಿಂದೂಗಳ ವೇಷದಲ್ಲಿ , ವ್ಯಾಪರಸ್ಥರ ವೇಷದಲ್ಲಿ, ಸರಕು ಸಾಗಣೆದಾರರ ವೇಷದಲ್ಲಿ, ಕೊನೆಗೆ ಭಿಕ್ಷುಕರ ವೇಷದಲ್ಲಿ, ಅನಾಥರ ವೇಷದಲ್ಲಿ, ಹಂಪೆಯ ಹೆಣ್ಣುಮಕ್ಕಳನ್ನು ಮದುವೆಯಾಗೋ ಸೋಗಿನಲ್ಲಿ ಬಂದಿಳಿದ ಕುತಂತ್ರ ಬಹುಮನ್ ಸೈನಿಕರ ವಾಸನೆ ರಾಮರಾಯನಿಗೆ ಏಕೆ ತಿಳಿಯದಾಯಿತೋ ಆ ತುಂಗಭಧ್ರೆಗಷ್ಟೇ ಗೊತ್ತು!.
ನೆನೆಪಿರಲಿ, ರಾಮರಾಯನ ಈ ಮೂರ್ಖತನದ ನಿರ್ಣಯದ ನಂತರ , ಒಂದೆರೆಡು ವರ್ಷಗಳಲ್ಲೇ ಹಂಪೆಯ ಸೈನ್ಯದ ಗಾತ್ರ1.40.000 ದಷ್ಟು ಪದಾತಿ ದಳವನ್ನ ಹೊಂದುವಂತೆ ಮಾಡಿತು!. ಅದರಲ್ಲಿರುವವರು ಎಲ್ಲರೂ ಶತ್ರು ಸೈನಿಕರೇ ಅಂತ ರಾಮರಾಯನಿಗೆ ತಿಳಿದದ್ದು, ತಾಳೀಕೋಟೆಯ ಯುದ್ಧದ ನಂತರದ ಅವನ ಶಿರಚ್ಛೇದವಾಗುವ ಕ್ಷಣದಲ್ಲಿ...!
ಸರಿ, ತನ್ನ ಸೈನ್ಯದ ಗಾತ್ರ ನೋಡಿ ಒಳಗೊಳಗೆ ಉಬ್ಬಿ ಹೋಗಿದ್ದ ರಾಮರಾಯ, ಯುದ್ಧಕ್ಕೆ ತಹತಹಿಸುತ್ತಿದ್ದ, ಯಾವಾಗ ದಖನ್ನಿನ ಸುಲ್ತಾನರ ಮೇಲೆ ದಾಳಿ ಮಾಡಿ, ಉತ್ತರದ ನರ್ಮದೆಯ ಮೇಲಿಂದ ಗಂಗೆಯವರೆಗಿನ ಭೂಭಾಗಕ್ಕೆ ಹಿಂದೂ ಸಾಮ್ರಾಜ್ಯದ ವಿಜಯ ಪತಾಕೆ ಹಾರಿಸುವ ಅವನ ಆ ಕನಸು ಕನಸಾಗೇ ಉಳಿಯಿತು..
ಹೌದು, ಹಿಂದೂಗಳ ವೇಷದಲ್ಲಿ ಬಂದ ದಖನ್ನಿನ ಸುಲ್ತಾನರು, ಹಂಪೆಯ ಸಮಸ್ತವನ್ನು ಗೂಢಾಚಾರಿಕೆಯ ಮೂಲಕ ತಿಳಿಸುತ್ತಾ ಹೋದರು, ಸೈನ್ಯದ ಗಾತ್ರವೆಷ್ಟು, ಅಶ್ವದಳ ಗಜದಳ ಪದಾತಿ ದಳ ಹಾಗೂ ತೋಪು ಪಿರಂಗಿ ಹಾಗೂ ಭರ್ಚಿ ಬಾಣ ಹಾಗೂ ಭಲ್ಲೆ ಎಲ್ಲಾ ಸೈನ್ಯದ ವಿವರಗಳನ್ನು ರವಾನಿಸುತ್ತಾ ಹೋದರು,
ಇದನ್ನೆಲ್ಲಾ ರಾಮರಾಯನಿಗೆ ಯಾರಾದರೂ ಹೇಳಬೇಕಿತ್ತು, ಏಕೆಂದರೆ ರಕ್ಕಸತಂಗಡಗಿ ಯುದ್ಧದ ನಂತರ ಹಂಪೆಯ ಮೇಲೆ ಆಗಬಹುದಾದ ಅದೆಷ್ಟೋ ಹೀನಾತಿಹೀನ ಕೃತ್ಯಗಳನ್ನು ತಡೆಯಬಹುದಿತ್ತು..
ಆದರೆ ಜನೆವರಿ 26 1565 ರಂದು ಇಂದಿನ ಬೀಜಾಪುರದ ತಾಳೀಕೋಟೆಯ ಬಳಿ ದಖನ್ನಿನ ಸುಲ್ತಾನರನ್ನು ಎದುರಗೊಂಡ ರಾಯಮರಾಯನ ಬಳಿ 1.40. 000 ಪದಾತಿ ದಳವಿತ್ತು, 40. 000 ಕುದುರೆಗಳು, 100 ಗಜಬಲ, !
ದಖನ್ನಿನ ಸುಲ್ತಾನರ ಬಳಿ ಕೇವಲ 80.000 ಸಾವಿರ ಪದಾತಿ ದಳ, 30.000 ಸಾವಿರ ಅಶ್ವಬಲ, ನೂರಾರು ತೋಪುಗಳು ಅಷ್ಟೇ..
ಆದರೆ ಯುದ್ಧ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಮಾರುವೇಷದಲ್ಲಿದ್ದ , ಮುಸ್ಲಿಂ ಸೈನಿಕರು, ವಿಜಯನಗರದ ಸೈನ್ಯದ ವಿರುದ್ಧವೇ ಹೋರಾಡಲಾರಂಭಿಸಿದರು,
ಏನಾಗುತ್ತಿದೆ ಎಂಬುದನ್ನು ರಾಮರಾಯನ ಜೊತೆ ಇಡೀ ಹಂಪೆಯ ಸೈನ್ಯಕ್ಕೆ ತಿಳಿಯದಾದ ಹೊತ್ತು!.
ವಿಜಯನಗರದ ಸೈನ್ಯ ಕುತಂತ್ರ ಷಡ್ಯಂತ್ರ ಕುಟೀಲ ನೀಚ ಹೇಯ ಅಮಾನವೀಯ ರಣನೀತಿಗೆ ಸಾಕ್ಷಿಯಾಗಿತ್ತು!. ರಾಮರಾಯನ ಶಿರಚ್ಛೇದನವಾದರೆ, ಹಂಪೆ ಮಾನಸಿಕವಾಗಿ ಸತ್ತಿತ್ತು..!
ಮುಂದೆ ಬಹುಮನಿಯ ಸುಲ್ತಾನರ ಸೈನಿಕರು ಮಾಡಿದ್ದು ಮಾತ್ರ ಯಾವತ್ತೂ ಮರೆಯದ ಆರದ ಗಾಯ.. !
ಹಾಗಾದರೆ ಹಂಪೆಯ ಜನ ಏನಾದರು? ಹಂಪೆಯ ಕಲಾವಿದರ ಮೇಲೆ ನಡೆದದ್ದಾದರೂ ಏನೂ? ಎತ್ತ ಹೋದರು ಹಂಪೆಯ ಕಟ್ಟಿದ ಆ ಕಾಣದ ಕಲಾವಿದರು? ಅಂತಹದೊಂದು ರಕ್ತಸಿಕ್ತ ಅಧ್ಯಾಯಕ್ಕೆ ಸಾಕ್ಷಿ ಆದಳೇ ತುಂಗಭಧ್ರೆ?
ನಿರೀಕ್ಷಿಸಿ,....... Help Karnataka sutta 😊
No comments:
Post a Comment