Monday, 11 December 2023

human man

ಈ ಸಾಧಕ ಮಲ್ಹೋತ್ರಾ ದಂಪತಿಗಳೇನಾದರೂ ವೀಕೆಂಡ್ ವಿತ್ ರಮೇಶ್ ಗೆ ಬಂದರೆ ರಮೇಶ್ ಅರವಿಂದ್ ಇವರ ಕಾಲು ತೊಳೆದು ಸ್ವಾಗತಿಸಬೇಕಾಗಬಹುದು. ಜೀವನದ 26 ವರ್ಷಗಳನ್ನು ಮರ ನೆಟ್ಟು ಸ್ವಂತ ಕಾಡು ನಿರ್ಮಿಸಿ ಅದರಲ್ಲಿ ವನ್ಯ ಮೃಗಗಳು ಬರುವಂತೆ ಮಾಡಿದ ಸಾಧನೆ ವಿಶ್ವದಲ್ಲಿಯೇ ಕೇವಲ ಎರಡು ಮೂರು ಜನ ಮಾಡಿದ್ದಾರೆ. 

ಸಾಲು ಮರದ ತಿಮ್ಮಕ್ಕರವರ ಸಾಧನೆಗಿಂತ ಇವರ ಸಾಧನೆ ಯಾವ ರೀತಿಯಲ್ಲೂ ಕಡಿಮೆಯಲ್ಲ. ತಿಮ್ಮಕ್ಕರವರ ಬಗ್ಗೆ ಪ್ರಚಾರವಾದರೂ ಆಗಿದೆ, ಮಲ್ಹೋತ್ರಾ ದಂಪತಿಯ ಸಾಧನೆ ಆಗಿರುವುದು ಕೂರ್ಗನಲ್ಲೇ ಆದರೂ ಕರ್ನಾಟಕದ ಜನತೆಗೆ ಇವರ ಬಗ್ಗೆ ಮಾಹಿತಿ ಕಡಿಮೆಯೇ. ವಿಶ್ವದಾದ್ಯಂತ ಮೀಡಿಯಾ ಇವರನ್ನು ಹಾಡಿ ಹೊಗಳುತ್ತಿರುವಾಗ ಕನ್ನಡ ಟೀವಿ ಚ್ಯಾನಲ್ ಗಳು ಎಂದಿನಂತೆಯೇ ಜ್ಯೋತಿಷ್ಯ ಮತ್ತು ಹೋಮಿಯೋಪಥಿ ಕಾರ್ಯಕ್ರಮ ಕೊರೆಯುತ್ತಿವೆ.

ಪಾಳು ಬಿದ್ದ ಜಮೀನನ್ನು ಖರೀದಿಸಿ, ಒಂದೊದೇ ಎಕರೆಯಲ್ಲಿ ಕೆಲಸ ಮಾಡಿ ಎವರ್ ಗ್ರೀನ್ ರೇನ್ ಫಾರೆಸ್ಟ್ , SAI Sanctuary ಎಂಬ ಪ್ರೈವೇಟ್ ಅಭಯಾರಣ್ಯ ನಿರ್ಮಿಸಿದ್ದು ಅನಿಲ್ ಮಲ್ಹೋತ್ರಾ ಮತ್ತು ಪಾಮೇಲಾ ಗೇಲ್ ಮಲ್ಹೋತ್ರಾ ದಂಪತಿ. 

ವಿದೇಶಿಯರು ರೀಸರ್ಚ್ ಮಾಡಲು ಬರುತ್ತಿದ್ದಾರೆ. ಬೇರೆ ಬೇರೆ ತರದ ಜಿಂಕೆ, ಮಂಗಗಳು, ನರಿ, ಹಾವುಗಳು, ಆನೆಗಳು, ಧೋಲ್, ಹುಲಿ, ಚಿರತೆ, ರಿವರ್ ಒಟ್ಟರ್ಸ್, ಮಲಬಾರ್ ಸ್ಕ್ವಿರಲ್, ಮೂನ್ನೂರು ತರದ ಪಕ್ಷಿಗಳು, ಪ್ರಪಂಚ ಎಲ್ಲೂ ಇರದ ಕೆಲವು ಸಸ್ಯಗಳು ಇವೆ. 

ಆಕ್ಸಫೋರ್ಡ್ ಯೂನಿವರ್ಸಿಟಿ ವಿಜ್ಞಾನಿಗಳು ಈ ಅಭಯಾರಣ್ಯಕ್ಕೆ "ನೋಹ್ಸ್ ಆರ್ಕ್" ಅಂತ ಹೆಸರಿಟ್ಟಿವೆ.

"ನಮ್ಮ ಜೀವನ ಸಾರ್ಥಕವಾಗಿದೆ" ಅಂತ ಪಾಮೇಲಾ ಗೇಲ್ ಮಲ್ಹೋತ್ರಾ ಹೇಳುತ್ತಾರೆ. ಅಭಯಾರಣ್ಯದ ಒಳಗೆ ಕೂರ್ಗ್ ಕಿಂತ ನಾಲ್ಕು ಡಿಗ್ರಿ ಕಡಿಮೆ ಉಷ್ಣಾಂಶ ಇರುತ್ತದೆಯಂತೆ. ಒಳಗೆ ಪರಿಸರ ಸ್ನೇಹಿ ಗ್ಯಾಸ್ ಉತ್ಪಾದನೆ ಯಿಂದ ಹಿಡಿದು, ಬಂದ ಅತಿಥಿಗಳಿಗೆ ರಸಾಯನಿಕ ರಹಿತ ತರಕಾರಿಯ ಆಹಾರದ ತನಕ ವ್ಯವಸ್ಥೆ ಇದೆ.  

ಸ್ವರ್ಗವನ್ನು ಬುವಿಗೆ ತಂದು, ಋಷಿ ಮುನಿಗಳಂತೆ ಹುಲಿ ಚಿರತೆ ಜಿಂಕೆಗಳ ನಡುವೆ ಜೀವಿಸುತ್ತಿರುವ ಮಲ್ಹೋತ್ರಾ ದಂಪತಿಗಳಿಗೆ ಸಾಷ್ಟಾಂಗ ಪ್ರಣಾಮಗಳು. ನಿಮ್ಮನ್ನು ಪಡೆದ ಕರ್ನಾಟಕ ಮಾತೆ ಧನ್ಯ..

Courtesy:-----ಒಳಿತು ಮಾಡು ಮನುಷ್ಯ fb page


No comments:

Post a Comment